Friday, April 19, 2013

ರಾಮಣ್ಣನ ಗಿರಣಿ

 ನಮ್ಮೂ ರಿನ  ಆಸು ಪಾಸಿಗೆ ಗಿರಣಿ ಅಂತ ಇದ್ರೆ ಅದು ರಾಮಣ್ಣನ ಅಂಗಡಿ. ಗಿರಣಿ ಅಂದ್ರೆ ಕಾಳು ಕಡಿಗಳನ್ನು ಹಿಟ್ಟು ಮಾಡುವ ಯಂತ್ರ. ರಾಮಣ್ಣನ ಅಂಗಡಿ ಅಂದ್ರೆ ನಮ್ಮೂರಲ್ಲಿ ಎಲ್ಲರಿಗು ಗೊತ್ತು. ಸಣ್ಣ ಮಕ್ಕಳಿಂದ ಅಜ್ಜನ್ದಿರೋರ್ಗು, ಹೆಂಗಸರು ಮುದ್ಕಿಯರಿಗೂ ಗೊತ್ತಿರಲಿಕ್ಕೆ ಸಾಕು. ಅದೆಂಥಾ special ಏನಿಲ್ಲ ಅಲ್ಲಿ, ಆದ್ರೆ ಎಲ್ಲರು ಬಂದು ಹೊದೊವ್ರೆ ಇ ಅಂಗಡಿಗೆ. ಅದು ದಿನಸಿ ಅಂಗಡಿ, ಕೂಲಿಕಾರರಿಂದ ಹಿಡಿದು ಎಲ್ಲರು ಏನಾದ್ರು ತೊಗೊಳೊವ್ರೆ ಅಲ್ಲಿ.

ರಾಮಣ್ಣನ ಅಂಗಡಿಲಿ ಸಣ್ಣ ಮಕ್ಕಳಿಗೆ ಹಿಡಿಸುವ chocolate, peppermint, ಬಿಸ್ಕೆಟ್, ಚಿಕ್ಕಿ, ಆಟಿಕೆಗಳು, ಬಲೂನು ಹೀಗೆ ತರಾವರಿಯ item ಇರುವುದು. ಅದು ಮಕ್ಕಳು ಅಂಗಡಿ ಒಳಗೆ ಹೋಗಿ ವಿಚಾರಿಸಿದರೆ ಮಾತ್ರ ಗೊತ್ತಾಗುವ ಸದ್ಯಥೆ. ನಿಮಗೇನು ಬೇಕು ಕೇಳುತ್ತ ಹೋದರಾಯಿತು, ಇದೆಯೋ, ಬರುವುದುಂಟೊ, ಇಲ್ಲವೋ ಹೇಳುವುದು ರಾಮಣ್ಣನದು. ಬೇಕಾದರೆ ತರಿಸಿ ಕೊಡುವ ಸಾದ್ಯಥೆನು ಇಲ್ಲದಿಲ್ಲ.   ಅವನಲ್ಲಿ ಸಿಗುತ್ತಿರುವ peppermint  ಶುಂಟಿ, ನಿಂಬೆ ಹುಳಿ, ಕೆಂಪಿ (ನಮಗೆ ಸ್ವಾತಂತ್ರ್ಯ ದಿನ ಶಾಲೆಯಲ್ಲಿ ಸಿಗುವುದು), ಬೆಂಡು ಬತ್ತಾಸು, ಮನೆಯಲ್ಲಿ ಮಾಡಿದ ಬೆಲ್ಲದುಂಡೆ, ಬುಂದಿ ಲಾಡು ಎಷ್ಟು ವಿಧ ವಿಧ. ಇಷ್ಟಿದ್ದರೂ ಅವನು ಯಾವತ್ತು ಮಕ್ಕಳಿಗೆ ಜಾಸ್ತಿ ಕೊಟ್ಟಿದ್ದೋ  ಅಥವಾ ಸುಮ್ಮನೆ ಹಾಗೆ ಕೊಟ್ಟಿದ್ದು ನಾನು ನೊಡಿಲ್ಲ.

ಕೂಲಿಕಾರರು ಅವನಲ್ಲಿ ದಿನಸಿ ತೊಗೊಳುವುದು ಜಾಸ್ತಿ. ಉದ್ರಿಗೆ ಕೊಡುವುದು ಉಂಟು ಅಲ್ಲಿ. ಅವರಿಗೆ ಹೇಳಿ ಮಾಡಿಸಿದಂಥಾ ಸಾಮಾನುಗಳು ಅಲ್ಲಿ ಸಿಗುವುದು ಜಾಸ್ತಿ, ಮಂಡಕ್ಕಿ, ಶೇವ್, ಕೆಂಪು ಬಾಳೆಕಾಯಿ, ಎಣ್ಣೆ, ದಿನ ಬಳಕೆಯವು ಕಡಿಮೆ ದರದ್ದು ಹೋಲ್ಸೇಲ್ನಂಥವು. ಯಾವುದಕ್ಕೂ ಕ್ವಾಲಿಟಿ ಗ್ಯಾರಂಟಿ ಇಲ್ಲ ಮತ್ತೆ.

ಅಂಗಡಿಯ ಬಗ್ಗೆ ಕೆಲವೊಂದು ಹೇಳಲೇ ಬೇಕು, ಅಂಗಡಿಗೆ ಏನಾದರು ಬೋರ್ಡ್ ಹೆಸರು ಇದ್ದಿದ್ದು ನಾನೆಂತು ನೋಡಿಲ್ಲ. ಅಂಗಡಿ ಇರುವುದು ರಸ್ತೆಯ ಒಂದು ಮಗ್ಗುಲಲ್ಲಿ, ಅಲ್ಲಿ ಅಂಗಡಿ ಇದೆ ಅಂತ ಗೊತ್ತಿರುವರಿಗೆ ಮಾತ್ರ ಗೊತ್ತಗುವನ್ಥದ್ದು.  ಮೂರು ಕೋಣೆಗಳು ಅಲ್ಲಿ. ಒಂದು ಮಾಮೂಲಿ ದಿನಸಿ ಸಿಗುವ ಅಂಗಡಿ, ಇನ್ನೊಂದು ಗಿರಣಿ ಇರುವ ಜಾಗ. ಇನ್ನೊಂದು ಅವರ ಮನೆಯ ಕೂಲಿಗಳ ಗೆಸ್ಟ್ ರೂಂ. ಮಣ್ಣಿನ ಗೋಡೆಯ ಅಂಗಡಿ, ಬಿಳಿ ಸುಣ್ಣ ಯಾವಾಗಲೋ ಬಡದಿದ್ದು, ಹೆಂಚಿನ ಸೂರು. ರಾಮನ್ನನಿಗೋ ನಾ  ನೋಡಿದಂಗೆ ೫೦ ವರ್ಷ ಮೆಲ್ಪಟ್ಟಿದೆ. ಅವನಿಗೆ ಹಿಟ್ಟು (ಗಿರಣಿಯಲ್ಲಿ ಹಿಟ್ಟು ಮಾಡುವಾಗ) ಬಡಿದು ಕೂದಲು ಬೆಳ್ಳಗಾಗಿತ್ತೊ ಅಥವಾ ನಿಜವಾಗ್ಲೂ ಬೆಳ್ಳಗಾಗಿದ್ಯೊ ಗೊತ್ತಾಗ್ತಾ ಇರ್ಲಿಲ್ಲ. ಅವನಿಗೆ ಏನು ಹೇಳಿದ್ರು ಸಿಟ್ಟು ಮಾಡಿಕೊಳ್ಳುವ ಮನುಷ್ಯನೇ ಅಲ್ಲ. ಚೌತಿ ಹಬ್ಬಕ್ಕೆ ಪಂಚಕಜ್ಜಾಯ ಮಾಡಲು ಕಡ್ಲೆ ಹಿಟ್ಟು ಮಾಡುವಾಗ ಮಡಿಯಲ್ಲೇ ಮಾಡಿಕೊಡುತ್ತಿದ್ದ. ಅವನ ಅಂಗಡಿಯಲ್ಲಿ ಬೆಕ್ಕಿನ ಮರಿಗಳು ಇರುತ್ತಿದ್ದವು. ಅವನ ಅಂಗಡಿಯ ಬೆಕ್ಕು ಮರಿ ಹಾಕಿದಾಗಲೆಲ್ಲ ಜನ ಬೇಕೆಂದು ತೆಗೆದುಕೊಂಡು ಹೊಗುತ್ತಾರೆ. ನಮ್ಮ ಶಾಲೆಯ ಶುಕ್ರವಾರದ ಶಾರದಾ ಪೂಜೆಗೆ ಅಲ್ಲಿಯದೇ ಕಡ್ಳೆ. ಗಟ್ಟಿಯದು ಮೆದುವಿಂದು ಎರಡೂ. ಸ್ವಲ್ಪ ತಿನ್ದಾಗಲೇ ಏನೋ ತುಂಬಾ ರುಚಿ. ಅವನ ಅಂಗಡಿಗೆ ಟೈಮಿಂಗ್ ಎನ್ನುವುದೇ ಇಲ್ಲ. ಅವನು ಬಾಗಿಲು ತೆಗೆದಾಗಲೇ ಸರಿ.

ನನ್ನ ಭೇಟಿ ಕಡಿಮೇನೆ ಅನ್ನಬೇಕು ರಾಮಣ್ಣನ ಅಂಗಡಿಗೆ. ಏನಾದರು ಹಿಟ್ಟು ಮಾಡಿಸುವದಿದ್ದರೆ, ಬೆಕ್ಕಿನ ಮರಿ ನೋಡಲು, ಎಲ್ಲೋ peppermint ತೊಗೊಳೊವಗ. ಕೇಳಿದ್ದು ಕೊಡುವ ಮುಂಚೆ ತುಂಬಾ ಮಾತು ಅವನದು, "ಎಂತಾ ಓದ್ತಾ ಇದ್ಯಾ?, 1st rank ನೀನೆಯನ?, ಅಜ್ಜನ್ ಮನಿಗ್ ಹೋಗಿದ್ಯ ಎಂತದು" ಹೀಗೆ... ಕೈ ಹಿಡಿದುಕೊಂಡು ಎಲ್ಲ ಪ್ರಶ್ನೆಗೂ ಸಮಂಜಸ ಉತ್ತರ ಹೇಳಿದ್ಮೇಲೆ ಅವನು ಬಿಡುವುದು.

ಈಗ ಸೊಸೈಟಿ ಅಂಗಡಿ ಬಂದಮೇಲೆ ರಾಮಣ್ಣನ ದಿನಸಿ ಅಂಗಡಿ ಅಷ್ಟಕ್ಕಷ್ಟೇ ಅನ್ನಿಸುತ್ತದೆ. ಗಿರಣಿ ಅಂಗಡಿ ಯಾವಾಗಲು ಅವನೇ ಬೇಕು, ಬೇರೆ ಯಾರದ್ದು ಗಿರಣಿ ಇನ್ನು ಬಂದಿಲ್ಲ, ಆದರೆ ಈಗಿನ ಕಾಲದಲ್ಲಿ ಹಿಟ್ಟು ತರುವವರೆ ಹೆಚ್ಚು, ಕಾಳು ಒಣಗಿಸಿ ಹಿಟ್ಟು ಮಾಡಿಸುವುದು ತುಂಬಾ ಕಡಿಮೆ ಎನ್ನಬೇಕು. ಈ ಸಾರಿ ಊರಿಗೆ ಹೋದಾಗ ರಾಮಣ್ಣನ ಅಂಗಡಿ ನೋಡಿಕೊಂಡು ಬರಲೆಬೆಕು.

Thursday, April 18, 2013

ಶುರು ಮಾಡಬೇಕಲ್ಲ ಏನಾದ್ರು

 ಏನೋ ತುಂಬಾ time  ಇದೆ ಅನ್ನೋ ಥರ ಆಫೀಸ್ ಅಲ್ಲಿ ಕೆಲ್ಸನೆ ಇರ್ಲಿಲ್ಲ. ಅದ್ಕೆ ಏನೋ ಇದ್ದು ಬದ್ದಾ  ಎಲ್ಲ ಬ್ಲಾಗ್ಸ್, online articles ಓದ್ತಾ ಕೂತ್ಗೊಂಡಿದ್ದೆ. ಇಷ್ಟೆಲ್ಲಾ ಜನ ಎಷ್ಟೆಲ್ಲಾ ಬರಿತಾರೆ ಏನೆಲ್ಲಾ ಮಾಡ್ತಾರೆ ಹವ್ಯಾಸವಾಗಿ ಅಂತ ಗೊತ್ತಾಗಿದ್ದೆ ಈಗ. ನಂಗು ಕನ್ನಡ ಓದೋಕೆ ತುಂಬಾ ಇಷ್ಟಾ ಆದ್ರೆ ನನ್ನ room mates ಪ್ರಕಾರ ನಾನು ಏನೋ ಕನ್ನಡ ದ್ವೇಷಿ, ಕನ್ನಡ ಅಂದ್ರೆ ನಂಗೆ ಸ್ವಲ್ಪ ಅಷ್ಟಕ್ಕೇ ಅಷ್ಟೇ ಅಂತ ಮಾಡ್ಬಿಟ್ಟಿದಾರೆ. ನನ್ನ ಏನು ವರ್ತನೆ ಅದಿಕ್ಕೆ ಕಾರಣ ಅಂತಾ ಅವ್ರ್ಗುನು ಗೊತ್ತಿಲ್ಲ ನಂಗು ಅಷ್ಟೆ. ನಾನು ಜಾಸ್ತಿ ಕನ್ನಡ cinema ನೋಡೋಲ್ಲ ಅಥವ ಹಿಂದಿ songs ಕೇಳೋದು ಜಾಸ್ತಿ ಅಂತಾ ಇರ್ಬೆಕು. ಅಥವಾ ನಾನು ಕನ್ನಡ ಪದ ಹುಡ್ಕ್ತಿರ್ತೀನಿ ಮಾತಾಡ್ಬೇಕಿದ್ರೆ. ಇದೆಲ್ಲ ಸಹವಾಸ ದೋಷ ಏನು ಮಾಡೊಕಗಲ್ಲ. ಆದರೆ ನಾನು ಓದೋದು ಜಾಸ್ತಿ ಕನ್ನಡ ಪುಸ್ತಕ, ಭೈರಪ್ಪ, ಬೀಚಿ, ಕಾರಂತ ಹೇಗೆ.

                         ಕಾರಣ ಏನೇ ಇರ್ಲಿ ನನಗೆ ಕನ್ನಡದಲ್ಲಿ ಏನಾದ್ರು ಬರ್ಯೋಣ ಹಳೆದೆಲ್ಲ ನೆನಪು ಮಾಡ್ಕೊಳೋಣ ಅನ್ಸ್ತ ಇತ್ತು ಅದ್ಕೆ ಇ ಸಾಹಸ ನಡೀತಾ ಇರೊದು. ನೋಡೋಣ ಎಷ್ಟ್ time ಸಿಕ್ಕಿ ನಾನು ಎಷ್ಟ್ ಬರೀತೀನಿ ಅಂತ. ಹಾಗೆ ಸುಮ್ನೆ ಯೋಚ್ಸ್ತಾ ಇದ್ದಾಗ ಏನೆಲ್ಲಾ ಬರಿಬಹುದಲ್ಲ ಎಷ್ಟೆಲ್ಲಾ ವಿಚಾರ ಇದ್ಯಲ್ಲ ನನ್ನಲ್ಲಿ ಅನ್ಸತ್ತೆ. ಯಾವಾಗ ಕಾರ್ಯರೂಪಕ್ಕೆ ತರ್ಬೇಕೋ ಆಗ ಏನಾದ್ರು ನೆಪ ಬರುತ್ತೆ. ಅರ್ರೆ ಇ ಭಾಷೆ ನಾನ್ ಬರಿತಾ ಇರೋದು ಯಾಕೋ formal ಅನ್ಸ್ತಾ ಇದೆ. ನೋಡೋನಾ ಹೋಗ್ತಾ ಹೋಗ್ತಾ ಹೇಗೆ ಅಗುತ್ತೆ. ಇವತ್ತಿಗೆ ಇಷ್ಟ ಸಾಕು, ಯಾಕಂದ್ರೆ ಅತೀ ಉತ್ಸಾಹ ಕೆಲವೊಮ್ಮೆ ಒಲ್ಲೆದಲ್ಲ. ಒಳ್ಳೆ ಪ್ರಾರಂಭ ಅನ್ಕೊತ ಮುಗ್ಸ್ತಿನಿ.

DH